ಬೊಮ್ಮನಕಟ್ಟೆ ಮೂಲ ನಿವಾಸಿಗಳಿಗಿಲ್ಲ ಮೂಲ ಸೌಕರ್ಯ ನಿವಾಸಿಗಳ ಗೋಳು ಕೇಳೋರ್ಯಾರು

ಬೊಮ್ಮನಕಟ್ಟೆ ವಾರ್ಡ್ ನಂಬರ್ 2ರಲ್ಲಿ ಸಮರ್ಪಕವಾದ ಯುಜಿಡಿ ವ್ಯವಸ್ಥೆ ಇಲ್ಲದೆ ಕಲುಷಿತ ನೀರು ರಸ್ತೆ ಹಾಗೂ ಮನೆ ಸೇರಿದಂತೆ ಎಲ್ಲೆಂದರಲ್ಲಿ ಸಂಗ್ರಹವಾಗುತ್ತಿದ್ದು ಗಬ್ಬೆದ್ದು ನಾರುತ್ತಿದೆ.
ಇದರಲ್ಲಿ ಕ್ರಿಮಿಕೀಟ ಅತಿಯಾದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ ಎಂಬುದು ಸ್ಥಳೀಯ ನಿವಾಸಿಗಳ ಮಾತು.

“ಮೂಲ ಸೌಕರ್ಯ” ಒದಗಿಸುವಂತೆ ಬಹಳಷ್ಟು ಬಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಎಂಜಿನಿಯರ್‌ಗಳ ಗಮನಕ್ಕೆ ತಂದು ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಮೂಲ ಸೌಕರ್ಯದಿಂದ ವಂಚಿತರಾಗಿರುವ ಸ್ಥಳೀಯ ನಿವಾಸಿಗಳು “ಮೆಟ್ರೋ ನ್ಯೂಸ್ 7″ದೊಂದಿಗೆ ಮಾತನಾಡಿದರು
ಜಿಲ್ಲಾಡಳಿತವು ಮೂಲ ನಿವಾಸಿಗಳಿಗೆ ಸೂಕ್ತವಾದ ಸ್ಮಶಾನವನ್ನು ನೀಡದೆ ಇಲ್ಲೇ ಒಂದು ಕೆರೆ ಇದ್ದು ಆ ಕೆರೆಯು “27” ಎಕರೆ ವಿಸ್ತೀರ್ಣದಲ್ಲಿದೆ ಅದೇ ಕೆರೆಯಲ್ಲೇ ಸ್ಮಶಾನಕ್ಕೆ ಜಾಗ ಕೊಟ್ಟಿದ್ದಾರೆ. ಮಳೆಗಾಲದಲ್ಲಿ ಶವಸಂಸ್ಕಾರ ಮಾಡಲು ತುಂಬಾ ಹೈರಾಣಾಗುತ್ತೇವೆ” ಎಂದು ಹೇಳಿದರು.

ಬೊಮ್ಮನಕಟ್ಟೆ ನಿವಾಸಿ ಮಾಲತೇಶ್ ರವರು “ಮೆಟ್ರೋ ನ್ಯೂಸ್ 7” ನೊಂದಿಗೆ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಒಂದು ಕುಟುಂಬದ ಸದಸ್ಯರೊಬ್ಬರು ಮೃತಪಟ್ಟ ಕಾರಣ ವಿಪರೀತ ಮಳೆಯಲ್ಲೇ ಕೆರೆಯಲ್ಲಿ ಶವಸಂಸ್ಕಾರ ಮಾಡಿದ್ದೇವೆ

ಆದರೆ ಸ್ಮಶಾನಕ್ಕೆ ಯಾವುದೇ ಶೆಡ್ ಅಥವಾ ಶೆಟರ್ ಕಾಂಪೌಂಡ್ ವ್ಯವಸ್ಥೆ ಯಾವುದನ್ನೂ ನೀಡಿಲ್ಲ. ಕೆರೆಯಲ್ಲೇ ಶವ ಸಂಸ್ಕಾರ ಮಾಡಬೇಕಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

“ಈ ಕೆರೆಯಲ್ಲೇ ಪೈಪ್ ಲೈನ್‌ ಹೋಗಿದೆ. ಮಲಿನವಾದ ಯುಜಿಡಿ ನೀರು ಬಂದು ಕೆರೆಯಲ್ಲಿ ಸೇರಿ ಕೆರೆಯ ನೀರಿನ ಬಣ್ಣವೇ ಬದಲಾಗಿದೆ. ಕರೆಯಲ್ಲಿನ ಪೈಪ್‌ ಹೊಡೆದರೆ ಕುಡಿಯುವ ನೀರು ಕಲುಷಿತಗೊಳ್ಳುವ ಆತಂಕ ಎದುರಾಗಿದೆ
ಕೆರೆಯ ಸ್ಮಶಾನ ಜಾಗದಲ್ಲಿ ಯಾವುದೇ ಸುರಕ್ಷಿತ ವ್ಯವಸ್ಥೆ ಕೂಡ ಮಾಡಿಲ್ಲ. ಇದು ಅಪಾಯದಿಂದ ಕೂಡಿದೆ ಎಂದು ತಿಳಿಸಿದರು.

ಕೊಳಚೆ ಯುಜಿಡಿ:
ಸ್ಥಳೀಯ ನಿವಾಸಿ ಶ್ರೀಕಾಂತ್ ರವರು “ಮೆಟ್ರೋ ನ್ಯೂಸ್ 7” ನೊಂದಿಗೆ ಮಾತನಾಡಿ ಕೆರೆಯ ಸುತ್ತಮುತ್ತಲಿನಲ್ಲಿ ಯುಜಿಡಿ ಗುಂಡಿ ತೆಗೆದು ಕೆರೆಗೆ ಪೈಪ್‌ಲೈನ್‌ ಕಲ್ಪಿಸಿ ಹಾಗೆ ಬಿಟ್ಟಿದ್ದಾರೆ. ಇದರಿಂದ ಈ ಗುಂಡಿಯಲ್ಲಿ ನೀರು ಶೇಖರಣೆಯಾಗಿ ಹಲವು ಬಾರಿ ಸ್ಮಶಾನದ ರಸ್ತೆ ಕಾಣಿಸದೆ ಸ್ಮಶಾನಕ್ಕೆ ಶವಸಂಸ್ಕಾರಕ್ಕೆ ಬಂದವರು ಗುಂಡಿಗೆ ಬಿದ್ದಿರೋ ಘಟನೆಗಳು ನಡೆದಿವೆ ಎಂದಿದ್ದಾರೆ.

ಸ್ಥಳೀಯ ನಿವಾಸಿ ಸುರೇಶ್ ರವರು “ಮೆಟ್ರೋ ನ್ಯೂಸ್ 7” ನೊಂದಿಗೆ ಮಾತನಾಡಿ ಕೆರೆಯಲ್ಲಿ ಪ್ರಾಣಿಗಳು ಧನ ಕರುಗಳು ಬಿದ್ದಿದ್ದು  ಅವುಗಳು ಮೃತಪಟ್ಟಿ ತೇಲಿಬಂದ ನಂತರವಷ್ಟೇ ತಿಳಿದುಬಂದಿದೆ.

ಇಂತಹ ಘಟನೆಗಳು ನಡೆದಿರುವುದು ವಿಷಾದದ ಸಂಗತಿ. ಇಲ್ಲಿ ಸುತ್ತಮುತ್ತಲಿನ ಹಲವು ಲೇಔಟ್‌ನ ಮಲಿನವಾದ ಯುಜಿಡಿ ನೀರನ್ನೂ ಈ ಕೆರೆಗೆ ಹರಿಯ ಬಿಟ್ಟಿದ್ದಾರೆ. ಇದರಿಂದ ವಿಪರೀತ ಸೊಳ್ಳೆ ಕಾಟ ಹೆಚ್ಚಾಗಿದೆ. ಇದರಿಂದ ಮಕ್ಕಳು, ಸ್ಥಳೀಯರು ಅನಾರೋಗ್ಯದಿಂದ ಬಳಲುವಂತ ಪರಿಸ್ಥಿತಿ ಎದುರಾಗಿದೆ” ಎಂದು ತಿಳಿಸಿದರು.

“ನೀರು ಹರಿಯುವ ಕಡೆ ಯುಜಿಡಿ ಪೈಪ್‌ಲೈನ್ ವ್ಯವಸ್ಥೆ ಮಾಡಿಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕೂಡ ನಮಗೆ ಯಾರೂ ಸ್ಪಂದಿಸುತ್ತಿಲ್ಲ” ಎಂದು  ಅಳಲು ತೋಡಿಕೊಂಡರು

ಇದರ ಕುರಿತು ಮಾಹಿತಿ ಪಡೆಯಲು ಕರ್ನಾಟಕ ಜಲ ಮಂಡಳಿಯ ಎಇಇ(AEE) ಮಿಥುನ್ ಅವರನ್ನು ಸಂಪರ್ಕಿಸಿ ಮಾತನಾಡಿ, “ನಾವು ಕರ್ನಾಟಕ ಜಲ ಮಂಡಳಿ ಹಾಗಾಗಿ ಏನೇ ಮೂಲಸೌಕರ್ಯ ಕೊರತೆ ಇದ್ದರೂ ಕೂಡಾ ಅದಕ್ಕೆ ಮಹಾನಗರ ಪಾಲಿಕೆ ಸ್ಪಂದಿಸಬೇಕು. ನಾವು ಏನೇ ಕೆಲಸ ಮಾಡುವುದಾದರು ನಮ್ಮ ಬಳಿ ಅನುದಾನ ಇರುವುದಿಲ್ಲ. ಪುನಃ ನಾವು ಮಹಾನಗರ ಪಾಲಿಕೆಗೆ ತಿಳಿಸಬೇಕು. ಮಹಾನಗರ ಪಾಲಿಕೆ ವತಿಯಿಂದ ನಮಗೆ ಯಾವುದೇ ಯುಜಿಡಿಯ ಎಸ್ಟಿಮೇಟ್ ತಯಾರಿ ಮಾಡುವಂತೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ನಾವು ನೇರವಾಗಿ ಹೊಣೆಗಾರರಾಗುವುದಿಲ್ಲ” ಎಂದು ಪ್ರತಿಕ್ರಿಯಿಸಿದರು.

“ಪಾಲಿಕೆಯಲ್ಲಿ ಅನುದಾನ ಇರುತ್ತದೆ. ಮಹಾನಗರ ಪಾಲಿಕೆಯ ಸಂಬಂಧಪಟ್ಟ ಎಂಜಿನಿಯರ್‌ಗೆ ದೂರು ಬಂದ ನಂತರ ಅವರು ಆ ಅನುದಾನವನ್ನು ಕೊಡಬೇಕು, ಇಲ್ಲವಾದರೆ ಎಸ್ಟಿಮೇಟ್ ಮಾಡಿಕೊಡಿ ಎಂದು ತಿಳಿಸಿದರೆ ನಾವು ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಮಾಡಿ ಎಸ್ಟಿಮೇಟ್ ತಯಾರಿಸಿ ಕೊಡಬಹುದು. ಎಸ್ಟಿಮೇಟ್‌ ಅನ್ನು ಮಹಾನಗರ ಪಾಲಿಕೆಗೆ ಸಬ್‌ಮಿಟ್‌ ಮಾಡಿದರೆ ಮಹಾನಗರ ಪಾಲಿಕೆಯವರು ಟೆಂಡರ್ ಕರೆದು ಮೂಲಸೌಕರ್ಯ ಕಲ್ಪಿಸಿಕೊಡಬಹುದು. ಹಾಗೆಯೇ ಮೂಲಸೌಕರ್ಯದ ಕೊರತೆ ಕುರಿತು ನನಗೆ ಸ್ಥಳೀಯರಿಂದ ಯಾವುದೇ ದೂರು ಬಂದಿಲ್ಲ” ಎಂದರು.

“ಅಧೀಕ್ಷಕ ಎಂಜಿನಿಯರ್ ಅಥವಾ ಉಪ ಆಯುಕ್ತರಿಗೆ ಒಂದು ರೆಪ್ರೆಸೆಂಟೇಷನ್ ಕೊಟ್ಟರೆ ಖಂಡಿತವಾಗಿಯೂ ನಾಳೆ ಬೆಳಿಗ್ಗೆಯೇ ಸ್ಥಳ ಪರಿಶೀಲನೆ ಮಾಡಿ, ಏನು ತೊಂದರೆಯಾಗಿದೆ ಎಂಬುದನ್ನು ಗಮನಿಸಿ ಕೂಡಲೇ ರಿಪೋರ್ಟ್ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು‌ ಫೋನ್‌ ಸಂಪರ್ಕಕ್ಕೆ ಲಭ್ಯವಾಗಿದ್ದು, “ಶಿವಮೊಗ್ಗ ಪಟ್ಟಣದಲ್ಲಿ ಯುಜಿಡಿ ಸಮಗ್ರವಾಗಿ ಕ್ರಮ ಕೈಗೊಳ್ಳಲು ಕರ್ನಾಟಕ ಒಳ ಚರಂಡಿ ಮಂಡಳಿ ಅವರು ಸೆಪರೇಟ್ ಎಸ್ಟಿಮೇಟ್ ಮಾಡಿ ಅವರು ನೋಡಿಕೊಳ್ಳುತ್ತಾರೆ. ಇದೆಲ್ಲ ಸರಿಪಡಿಸಿಕೊಡಲು 150ರಿಂದ 200 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ನಾವೂ ಕೂಡಾ ಎಲ್ಲೆಲ್ಲಿ ಏನೇನು ಸಮಸ್ಯೆ ಇದೆ ಅಲ್ಲೆಲ್ಲಾ ಸರಿ ಮಾಡಲು ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದೇವೆ. ಅವೆಲ್ಲ ಕಾಲಾನುಕ್ರಮ ಟೆಂಡರ್ ಅಪ್ರೂವಲ್ ಆದಾಗ ನಡೆದುಕೊಳ್ಳುತ್ತ ಹೋಗತ್ತೆ. ಎಮರ್ಜೆನ್ಸಿಯಲ್ಲಿ ಶಾರ್ಟ್ ಟರ್ಮ್‌ನಲ್ಲಿ ಅಂದರೆ 3 ದಿನ, ವಾರ, 15 ದಿನ, 1 ತಿಂಗಳು ಏನಾದರೂ ಪರಿಹಾರ ಮಾಡಲು ಹೀಗೆ ಮಾಡಿದರೆ ಸರಿಯಾಗುತ್ತೆ ಎಂಬ ಪರಿಹಾರ ನಮಗೆ ತಿಳಿಸಿದರೆ ಅವಾಗ ನಾವು ಅದನ್ನು ಬಗೆಹರಿಸುತ್ತೇವೆ” ಎಂದು ತಿಳಿಸದರು.

“ಸರ್ಕಾರದಿಂದ ಅನುದಾನ ಬಿಡುಗಡೆ ಆಗಬೇಕು. ಇಡೀ ಶಿವಮೊಗ್ಗದಲ್ಲಿ ಸಮರ್ಪಕ ವ್ಯವಸ್ಥೆ ಮಾಡಲು ₹700 ಕೋಟಿ ಬೇಕಾಗತ್ತದೆಂದು ಹೇಳಿದ್ದರು. ಅಷ್ಟೆಲ್ಲ ಆಗುವುದಿಲ್ಲವೆಂದು ತಿಳಿಸಿದಕ್ಕೆ ಕೊನೆಗೆ ₹250 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಬಳಿಕ ₹150 ಕೋಟಿಗೆ ಇಳಿಸಿ ಪ್ರಸ್ತಾವನೆ ಸರ್ಕಾರದಲ್ಲಿಯೇ ಇದೆ. ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ” ಎಂದು ಹೇಳಿದರು.

“ಕೆರೆಯಲ್ಲಿರುವ ಸ್ಮಶಾನ ಜಾಗಕ್ಕೆ ಯಾವುದೇ ವ್ಯವಸ್ಥೆ ಇಲ್ಲವೆಂಬ ಸಮಸ್ಯೆ ನಮ್ಮ ಗಮನಕ್ಕೆ ಇದೆ. ಮೂರು ದಿನಗಳ ಹಿಂದೆ ಮಳೆಯಲ್ಲೇ ಶವಸಂಸ್ಕಾರ ಮಾಡಿರುವ ವಿಷಯ ನಮ್ಮ ಗಮನದಲ್ಲಿದೆ. ಮೊದಲು ಆ ಜಾಗದ ಸರ್ವೇ ಆಗಬೇಕು. ಸದ್ಯಕ್ಕೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸುವ ಒಂದು ವ್ಯವಸ್ಥೆ ಮಾಡಬೇಕು. ಎರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ” ಎಂದು ತಿಳಿಸಿದರು

ವರದಿ : ಮೆಟ್ರೋ ನ್ಯೂಸ್

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ವರದಿ: ಲೋಕೇಶ್ ನಾಯ್ಕ .ಭಟ್ಕಳ ಭಟ್ಕಳ : ನವೆಂಬರ್‌ 23ರಾಜ್ಯದಲ್ಲಿ ನಡೆದ ಉಪಚುನಾವಣೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯ. ಭಟ್ಕಳದಲ್ಲಿ  ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸಂಮ್ಸುದ್ದೀನ ಸರ್ಕಲ್ ನಲ್ಲಿ  ಪಟಾಕಿ ಸಿಡಿಸಿ ಸಂಭ್ರಮಾಚರಣೆ . ಈ ಸಂದರ್ಭದಲ್ಲಿ…

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    ವರದಿ :ಆರತಿ ಗಿಳಿಯಾರು ಉಡುಪಿ : ನ.23ಬ್ರಹ್ಮಾವರ ತಾಲ್ಲೂಕಿನ ಮೂಡು ಗಿಳಿಯಾರು ಶಾಲಾ ಮೈದಾನದಲ್ಲಿ  ದಿನಾಂಕ  ಡಿಸೆಂಬರ್ 14 ಮತ್ತು 15 ರಂದು ನಿಸರ್ಗ ಕ್ರಿಕೆಟರ್ಸ್   ಗಿಳಿಯಾರು ಇವರ ವತಿಯಿಂದ ಪ್ರಥಮ ಬಾರಿಗೆ ರಾಜ್ಯಮಟ್ಟದ ಹೊನಲು ಬೆಳಕಿನ 40 ಗಜಗಳ ಕ್ರಿಕೆಟ್…

    You Missed

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.