ವರದಿ : ಆರತಿ ಗಿಳಿಯರು
ಉಡುಪಿ :ಅ.28
ಕುಂದಾಪುರ ತಾಲ್ಲೂಕು ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ ಇದ್ದು ಇಂದಿನ ಚುನಾವಣೆಯಲ್ಲಿ ಭಾಗವಹಿಸಿದ ಅಭ್ಯರ್ಥಿಯವರಾದ ನಾಗೇಂದ್ರ. ಜೆ ಇವರು ತನ್ನ ಪ್ರತಿಸ್ಪರ್ಧಿ ಆದಂತಹ ಚಂದ್ರಕಾಂತ ಬಿಲ್ಲವ ಇವರನ್ನು 53/17 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿರುತ್ತಾರೆ.
ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯಾದ ನಾಗೇಂದ್ರ ಇವರು ಮಾಧ್ಯಮದ ಜೊತೆ ಮಾತನಾಡಿ ತನ್ನ ಆರ್. ಡಿ.ಪಿ.ಆರ್ ಕುಟುಂಬದ ಮತನೀಡಿದ ಸದಸ್ಯರಿಗೆ ಧನ್ಯವಾದ ಸೂಚಿಸುವುದರ ಜೊತೆಗೆ ನೌಕರರ ಸಮಸ್ಯೆಗಳನ್ನು ಹಾಗೂ ಎನ್.ಪಿ.ಎಸ್ ರದ್ದುಗೊಳಿಸಿ ಓ. ಪಿ. ಎಸ್ ಮರು ಜಾರಿಗೊಳಿಸಲು ಬೆಂಬಲ ನೀಡುವುದಾಗಿ ತನ್ನ ಸಹೋದ್ಯೋಗಿಗಳಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತನ್ನ ಸಹೋದ್ಯೋಗಿಗಳಾದ ಕುಂದಾಪುರ ತಾಲ್ಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರ ಬಿಲ್ಲವ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದಂತಹ ಶ್ರೀ ಉಮಾಶಂಕರ್, ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಡಾಕ್ಟರ್ ರವಿ ಹುಕ್ಕೇರಿ, ಸಹಾಯಕ ಲೆಕ್ಕಾಧಿಕಾರಿ ಸಂತೋಷ್, ಅಭಿವೃದ್ಧಿ ಅಧಿಕಾರಿಗಳ ಸಂಘದ ಖಜಾಂಚಿ ಗುರುಮೂರ್ತಿ, ಪಂಚಾಯತ್ ಕಾರ್ಯದರ್ಶಿ ಸಂಜೀವ ತೆಕಟ್ಟೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬೀಜಾಡಿ ಶ್ರೀ ಗಣೇಶ್, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರ ಆಪ್ತ ಸಹಾಯಕರಾದ ಶ್ರೀ ಮಹಿಮಾ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಕ್ಲಾಡಿ ಸತೀಶ್ ವಡ್ಡರ್ಸೆ, ಲೆಕ್ಕ ಸಹಾಯಕರು ರಾಮದಾಸ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ದೀಪಾ.ಜಿ, ಪಂಚಾಯತ್ ಕಾರ್ಯದರ್ಶಿಗಳಾದ ಪ್ರಸಾದ್ ಮತ್ತು ಗಣೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ನಾರಾಯಣ ಬನಶಂಕರಿ, ಇವರುಗಳು ಉಪಸ್ಥಿತರಿದ್ದು ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ನಾಗೇಂದ್ರ.ಜೆ ಇವರನ್ನು ಹೂಗುಚ್ಚ ನೀಡಿ ಸಂಭ್ರಮಿಸಿ ಅಭಿನಂದಿಸಿದರು.
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…